Friday, April 24, 2009

"ನೀ"

ಅಲೆ ಬಂದು ಸೆಲೆಯಾಗಿ
ಪ್ರೀತಿಯ ಮಳೆಯಾಗಿ
ನನ್ನ ತುಂಬ ನಿನ್ನ ಬಿಂಬವು

ಕಣ್ತುಂಬ ಕನಸುಗಳು
ಎದೆಯಲ್ಲಿ ನೀ ಇರಲು
ನಿನ್ನ ಹೆಸರೆ ಜೀವಾಳವು

ಕಿರುಬೆರಳು ಕುಣಿದಾವು
ಕೆಂದುಟಿಯು ನಗುತಾವು
ಕಣ್ಣಲ್ಲೆ ಸಂಗೀತವು

ಬಳಿ ಕರೆವ ಮುಂಗುರುಳು
ಹುಟ್ಟಾವೆ ಕವನಗಳು
ಜೊತೆಯಾಯ್ತು ಕುಡಿ ನೋಟವು

ರವಿ ಬಂದು ಬೆಳಕಾಗಿ
ಚಂದ್ರಮನೂ ನಗೆ ಸೂಸಿ
ನಿನ್ನ ತುಟಿಯ ಕೊಲ್ಮಿಂಚಿಗೆ

ಅಪ್ಪುಗೆಯ ಸಾಂತ್ವನ
ಕನಸಿನಲೂ ಅಹ್ವಾನ
ಬಳಿ ಇರಲು ನೀ ಬೆಚ್ಚಗೆ

ಕಾಯುವುದೆ ಕಸುಬಿರಲು
ಜೊತೆ ನಿನ್ನ ನೆನಪಿರಲು
ಇನ್ಯಾಕೆ ಕಹಿ ಬೇಗುದಿ

ಅಗಲಿಕೆಗೆ ಜೊತೆಯುಂಟು
ವಿರಹಕೂ ಸಿಹಿಯುಂಟು
ನಿನ್ನ ನಲ್ಮೆಯ ಸ್ಪರ್ಶದಿ