ಅನಾಮಿಕರು, ಸಹ
ಪಯಣಿಗರು
ಬಂದವರು, ಹೋದವರು
ನಿಂತು ನಕ್ಕವರು, ನೆರಳಿಗೆ
ಹೆಗಲಾದವರು
ದೂರದ ಬೆಟ್ಟಗಳು
ತೀರದ ಅಲೆಗಳು
ಮಾನಸ ಸರೋವರಗಳು
ರಹದಾರಿಯುದ್ದ ಕಾಣದ
ತಿರುವುಗಳು
ಕನಸು ಅಂಚೆ ಚೀಟಿಗಳಂತೆ
ಮನಸೋ ಬಾಲಂಗೋಚಿಯಂತೆ
ಮಾಡಿದ್ದು ಹತ್ತಾರು
ಕಂಡಿದ್ದು ಹಲವಾರು
ಉಳಿಸಿದ್ದೋ ನೂರಾರು!
ಬೇಕುಗಳ ಪಲಾಯನ
ಬಿಡಲಾರದವುಗಳ ಸಹ
ಗಮನ
ಕಣ್ಣ ತಪ್ಪಿಸಿ, ಬೆನ್ನ ತೋರಿಸಿ
ಮಾಸಿ ಮರೆತ ನೆನಪುಗಳು
ಇಷ್ಟಾದರೂ, ಮನಸ್ಸು
ಕನಸ ಕಾಣುವುದ ಬಿಟ್ಟಿಲ್ಲ
ಗಳಿಗೆಗೊಂದು
ದೇಹಕೋ,
ದಾಟಿತ್ತು ವಯಸ್ಸು ಆಗಲೆ
ಮೊವತ್ತೊಂದು