Saturday, July 4, 2009

ತೀರದ ಕನಸುಗಳು

ತೀರದ ಕನಸುಗಳು

ನನ್ನ ನಾಳೆಗಳು
ಕಾಲಿ ಹಾಳೆಗಳು
ಗೀಚಿದ್ದು ಗೋಚರಿಸದು
ಲೇಖನಿಯು ಲೇಸೆನ್ನದು

ಆಗೊಮ್ಮೆ ಈಗೊಮ್ಮೆ
ಹಿಡಿತವಿಲ್ಲದ ಭಾವನೆಗಳು
ಉಕ್ಕುವುದು ಕುಕ್ಕುವುದು
ಅಲೆ ತರುವ ಸೆಲೆಯಂತೆ

ನನಸಾಗದೆ ಸಾಯುವುದು
ದಡಕಪ್ಪುವ ಅಲೆ ಬರಲು
ನೆನಪಾಗೆ ಕಾಡುವವು
ತೀರದ ಕನಸುಗಳು

ನಾಳೆಗಳು ನಿನ್ನೆಯಾಗಲು
ಕನಸುಗಳು ಕನವರಿಸುವವು
ನೋಡಿದ್ದು ನಿಲುಕದು
ಕೈಗೆಟುಕದೆ ಒಗಟಾದವು

ನಾ ಕಟ್ಟೊ ಕನಸುಗಳು
ಬೆರಳುಗಳು ಗೀಚುವ
ಕಡಲ ತೀರದ
ಮರಳ ರಂಗೋಲಿಯಂತೆ

- ದಿನಾಂಕ: ಜುಲೈ ೨, ೨೦೦೯

No comments: