Sunday, June 21, 2009

ನೀನೆ

"ನೀನೆ"

ಹರಿವ ನೀರಲಿ, ಸುರಿವ ಮಳೆಯಲಿ
ಬೀಸೊ ಗಾಳಿಲಿ, ಕಾಡೊ ನೆನಪಲಿ
ಕಾಣಿಸುವೆ ಮತ್ತಲ್ಲಿ ನೀನು
ಹೆಜ್ಜೆಯ ಅಚ್ಚುಳಿಸಿಹ ಮೀನು

ಎದೆಯಾಳದ ಕೊಳದಲಿ ತುಂಬಿರೊ
ನೆನಪುಗಳ ತುಂತುರು ನೀನೆ
ಎದೆ ಮುಗಿಲ ತೋರಣ ಕಟ್ಟಿಹ
ಭಾವನೆಗಳ ಮಳೆ ಹನಿ ನೀನೆ

ನೆನಪುಗಳು ಕವನ ಕಟ್ಟಲು
ಸಿಲುಕಿರುವ ಸರಪಳಿ ನೀನೆ
ಮುಂಜಾವಿನ ಕೊರೆಯುವ ಚಳಿಯಲು
ಮುದ ನೀಡುವ ಕಚಗುಳಿ ನೀನೆ

ಮುಸ್ಸಂಜೆಯು ಬೆಳಕನು ನುಂಗಲು
ದಡಕಪ್ಪುವ ಅಲೆಯಲೂ ನೀನೆ
ಕನಸುಗಳ ನಿದಿರೆಯ ಕಂದನ
ತುಟಿಯಂಚಿನ ನಗುವಲೂ ನೀನೆ

ಕತ್ತಲೆಗೆ ಮುಚ್ಚಿಹ ಕಣ್ಗಳ
ತೆರೆಯಿಸುವ ಕೈಗಳೂ ನೀನೆ
ಎಲ್ಲೆಲ್ಲೂ ನೀನೆ ಪಸರಿಸಿ
ನೀನಿಲ್ಲದ ನೋಟವ ಕಾಣೆ

===================
- ದಿನಾಂಕ: ಮೇ ೬, ೨೦೦೯

No comments: