Wednesday, May 4, 2011

ಚುಟುಕು - ಚೂರು ಗುಟುಕು




ಚುಟುಕು - ಚೂರು ಗುಟುಕು


ಹಳೆಯ ನೆನಪುಗಳು
ಕಹಿಯಾಗಿದ್ದರೆ
ಬದುಕ ಮಾಡುವುದು
ಪ್ರಸಾರ
ಕಪ್ಪು-ಬಿಳುಪು
ಸಿಹಿಯೊ?
ಸುತ್ತೆಲ್ಲ ಕಾಮನ
ಬಿಲ್ಲು

--

ಒಮ್ಮೊಮ್ಮೆ
ಕನಸ ಹಿಂದೆ
ಬಿದ್ದಾಗೆಲ್ಲ
ಅನಿಸುವುದು, ನಾನು
ನೆರಳ ಹಿಡಿಯ
ಹೊರಟ
ಬೆಳಕು
ಹತ್ತಿರ ಹೋದಂತೆಲ್ಲಾ
ಉಳಿಯುವುದು ಬರಿ
ಶೂನ್ಯ


--

ಮೌನಕೆ
ಯಾಕೊ ತಿಳಿಯದು
ಹಗಲೊಂದಿಗೆ ಮುನಿಸು
ಕತ್ತಲ ಜೊತೆ
ಸರಸವಾಡೆ
ಹುಟ್ಟಿಸುವುದು
ನೋವು

--

ಅಳಿದುದಕೆ ಕೊರಗಿ
ಬಾಡುತಿವೆ ಇಂದುಗಳು
ಹಾಗೂ ಹೀಗೂ
ಬದುಕು ಬಾಗುವತ್ತ
ಹಣೆಯಲ್ಲಿ ಕಾಗುಣಿತ
ಚಿಂತೆ ನಡೆಯುತ್ತಿದೆ
ಶೂನ್ಯವನ್ನಳಿಸುವತ್ತ


2 comments:

Vibhu NR said...

ಚುಟುಕಿನ-ಗುಟುಕು... ಬದಕಿನ ವಿಭಿನ್ನ ತರಂಗಗಳ ಚಿತ್ರಣ ಮತ್ತು ಪ್ರೀತಿಯಿಂದ ಕುಟುಕುವಂತಿದೆ :)

Operation Crazyhouse said...

bhayankara! :)